Documentation 0.1

Common Content

ಆವೃತ್ತಿ 0

Dude McDude

My Org Best Div in the place

Legal Notice

Copyright © 2009 Red Hat, Inc.. This material may only be distributed subject to the terms and conditions set forth in the Open Publication License, V1.0, (the latest version is presently available at http://www.opencontent.org/openpub/).
Fedora and the Fedora Infinity Design logo are trademarks or registered trademarks of Red Hat, Inc., in the U.S. and other countries.
Red Hat and the Red Hat "Shadow Man" logo are registered trademarks of Red Hat Inc. in the United States and other countries.
All other trademarks and copyrights referred to are the property of their respective owners.
Documentation, as with software itself, may be subject to export control. Read about Fedora Project export controls at http://fedoraproject.org/wiki/Legal/Export.

(preface title goes here)

1. ದಸ್ತಾವೇಜು ಅನುಸರಣೆಗಳು

ಈ ಕೈಪಿಡಿಯು ಹಲವಾರು ಪದಗಳು ಹಾಗು ಪದಗುಚ್ಛಗಳನ್ನು ಹೈಲೈಟ್ ಮಾಡಿ ಕೆಲವು ನಿಗದಿತ ಮಾಹಿತಿಗಳತ್ತ ಗಮನ ಸೆಳೆಯಲು ಕೆಲವು ಅನುಸರಣೆಯನ್ನು ಬಳಸುತ್ತದೆ.
PDF ಹಾಗು ಪೇಪರ್ ಆವೃತ್ತಿಗಳಲ್ಲಿ, ಈ ಕೈಪಿಡಿಯುಲಿಬರೇಶನ್ ಅಕ್ಷರಶೈಲಿಗಳು ಯಿಂದ ಪಡೆದುಕೊಳ್ಳಲಾದ ಟೈಪ್‌ಫೇಸ್‌ಗಳನ್ನು ಬಳಸುತ್ತದೆ. ನಿಮ್ಮ ಗಣಕದಲ್ಲಿ ಲಿಬರೇಶನ್ ಅಕ್ಷರಶೈಲಿಗಳನ್ನು ಅನುಸ್ಥಾಪಿಸಲಾಗಿದ್ದರೆ HTML ಆವೃತ್ತಿಗಳಲ್ಲಿಯೂ ಸಹ ಇದನ್ನೆ ಬಳಸಲಾಗುತ್ತದೆ. ಇಲ್ಲದೆ ಹೋದಲ್ಲಿ, ಪರ್ಯಾಯವಾದ ಆದರೆ ಅದಕ್ಕೆ ಸಮನಾದ ಟೈಪ್‌ಫೇಸ್‌ಗಳನ್ನು ತೋರಿಸಲಾಗುವುದು. ಸೂಚನೆ: Red Hat Enterprise Linux 5 ಹಾಗು ಅದರ ನಂತರದವುಗಳಲ್ಲಿ ಡೀಫಾಲ್ಟ್‍ ಆಗಿ ಲಿಬರೇಶನ್ ಅಕ್ಷರಶೈಲಿಗಳು ಇರುತ್ತವೆ.

1.1. ಟೈಪೋಗ್ರಾಫಿಕ್ ಅನುಸರಣೆಗಳು

ನಿಗದಿತ ಪದಗಳು ಹಾಗು ಪದಗುಚ್ಛಗಳತ್ತ ಗಮನವನ್ನು ಸೆಳೆಯಲು ನಾಲ್ಕು ಟೈಪೋಗ್ರಾಫಿಕ್ ಅನುಸರಣೆಗಳನ್ನು ಬಳಸಲಾಗುತ್ತದೆ. ಈ ಅನುಸರಣೆಗಳು ಹಾಗು ಅವುಗಳನ್ನು ಅನ್ವಯಿಸಲಾಗುವ ಸನ್ನಿವೇಶಗಳು ಈ ಕೆಳಗಿನಂತಿವೆ.
Mono-spaced Bold
ಶೆಲ್‌ ಆಜ್ಞೆಗಳು, ಕಡತದ ಹೆಸರುಗಳು ಹಾಗು ಮಾರ್ಗಗಳಂತಹ ಗಣಕದ ಆದಾನವನ್ನು(ಇನ್‌ಪುಟ್) ಹೈಲೈಟ್ ಮಾಡಲು ಬಳಸಲಾಗುತ್ತದೆ. ಅಲ್ಲದೆ ಕೀಲಿ ಕ್ಯಾಪ್‌ಗಳನ್ನು ಹಾಗು ಕೀಲಿ-ಸಂಯೋಜನೆಗಳನ್ನೂ ಸಹ ಹೈಲೈಟ್ ಮಾಡಲು ಬಳಸಲಾಗುತ್ತದೆ. ಉದಾಹರಣೆಗೆ:
my_next_bestselling_novel ಕಡತದಲ್ಲಿ ಏನಿದೆ ಎಂದು ನೋಡಲು , ಪ್ರಸಕ್ತ ನೀವು ಕೆಲಸ ಮಾಡುತ್ತಿರುವ ಕೋಶದಲ್ಲಿ, ಶೆಲ್‌ ಪ್ರಾಂಪ್ಟಿನಲ್ಲಿ cat my_next_bestselling_novel ಎಂಬ ಆಜ್ಞೆಯನ್ನು ನಮೂದಿಸಿ ಹಾಗು ಅದನ್ನು ಚಲಾಯಿಸಲು Enter ಅನ್ನು ಒತ್ತಿ.
ಮೇಲೆ ಹೇಳಲಾಗಿದ್ದರಲ್ಲಿ ಒಂದು ಕಡತದ ಹೆಸರು, ಒಂದು ಶೆಲ್‌ ಆಜ್ಞೆ ಹಾಗು ಒಂದು ಕೀಲಿ ಕ್ಯಾಪ್ ಇದೆ, ಹಾಗು ಅವುಗಳೆಲ್ಲವೂ Mono-spaced Bold ನಲ್ಲಿ ಸೂಚಿಸಲಾಗಿದ್ದರಿಂದ ಬಾಕಿ ಪಠ್ಯಗಳಿಗಿಂತ ಪ್ರತ್ಯೇಕವಾಗಿ ಕಾಣುತ್ತವೆ.
ಕೀಲಿ-ಸಂಯೋಗದ ಪ್ರತಿಯೊಂದು ಭಾಗವನ್ನು ಜೋಡಿಸುವ ಕೀಲಿ ಕ್ಯಾಪ್‌ಗಳಿಂದ ಕೀಲಿ-ಸಂಯೋಗಗಳನ್ನು ಪ್ರತ್ಯೇಕಿಸಬಹುದಾಗಿದೆ. ಉದಾಹರಣೆಗೆ:
ಆಜ್ಞೆಯನ್ನು ಕಾರ್ಯಗತಗೊಳಿಸಲು Enter ಅನ್ನು ಒತ್ತಿ.
ಮೊದಲನೆ ವರ್ಚುವಲ್ ಟರ್ಮಿನಲ್‌ಗೆ ಬದಲಾಯಿಸಲು Ctrl+Alt+F1 ಅನ್ನು ಒತ್ತಿ. ನಿಮ್ಮ X-ವಿಂಡೋಸ ಅಧಿವೇಶನಕ್ಕೆ ಮರಳಲು Ctrl+Alt+F7 ಅನ್ನು ಒತ್ತಿ.
ಮೊದಲನೆ ವಾಕ್ಯವು ನಿಗದಿತ ಕೀಲಿ ಕ್ಯಾಪ್ ಅನ್ನು ಒತ್ತಲು ಹೈಲೈಟ್ ಮಾಡುತ್ತದೆ. ಎರಡನೆಯದು ಅನುಕ್ರಮವಾಗಿ ಒತ್ತಲು ಮೂರು ಕೀಲಿ ಕ್ಯಾಪ್‌ಗಳ ಎರಡು ಜೋಡಿಗಳನ್ನು ಹೈಲೈಟ್‌ ಮಾಡುತ್ತದೆ.
ಎಲ್ಲಿಯಾದರೂ ಆಕರ ಸಂಜ್ಞೆಯ(ಸೋರ್ಸ್‌ ಕೋಡ್) ಬಗ್ಗೆ ತಿಳಿಸುವಂತಿದ್ದಲ್ಲಿ, ವರ್ಗದ ಹೆಸರುಗಳು,ಕ್ರಮಗಳು, ಕಾರ್ಯಗಳು, ವೇರಿಯಬಲ್ ಹೆಸರುಗಳು ಹಾಗು ಮರಳಿಸಿದ ಮೌಲ್ಯಗಳನ್ನು ಒಂದು ಪ್ಯಾರಾದಲ್ಲಿ ಮೇಲಿನಂತೆ Mono-spaced Bold ನಲ್ಲಿ ತೋರಿಸಲ್ಪಡುತ್ತದೆ. ಉದಾಹರಣೆಗೆ:
ಕಡತಕ್ಕೆ ಸಂಬಂಧಿಸಿದ ವರ್ಗಗಳಾದಂತಹ ಕಡತವ್ಯವಸ್ಥೆಗಳಿಗಾಗಿನ filesystem,ಕಡತಕ್ಕಾಗಿನ file, ಹಾಗು ಕೋಶಕ್ಕಾಗಿನ dir. ಪ್ರತಿ ವರ್ಗವೂ ಅದಕ್ಕೆ ತಕ್ಕಂತೆ ಸ್ವಂತಅನುಮತಿಗಳನ್ನು ಹೊಂದಿರುತ್ತವೆ.
Proportional Bold
ಇದು ಅನ್ವಯದ ಹೆಸರುಗಳು, ಸಂವಾದ ಪೆಟ್ಟಿಗೆ ಪಠ್ಯ; ಲೇಬಲ್‌ ಮಾಡಲಾದಂತಹ ಗುಂಡಿಗಳು; ಚೆಕ್‌-ಬಾಕ್ಸ್ ಹಾಗು ರೇಡಿಯೋ ಗುಂಡಿ ಲೇಬಲ್‌ಗಳು; ಮೆನು ಶೀರ್ಷಿಕೆಗಳು ಹಾಗು ಉಪ-ಮೆನು ಶೀರ್ಷಿಕೆಗಳಂತಹ ಒಂದು ಗಣಕದಲ್ಲಿ ಎದುರಾಗುವ ಪದಗಳು ಅಥವ ವಾಕ್ಯಗಳನ್ನು ಸೂಚಿಸುತ್ತದೆ. ಉದಾಹರಣೆಗೆ:
ಮೌಸ್‌ನ ಆದ್ಯತೆಗಳು ಅನ್ನು ಆರಂಭಿಸಲು ಮುಖ್ಯ ಮೆನು ಪಟ್ಟಿಯಿಂದ ಗಣಕ > ಆದ್ಯತೆಗಳು >ಮೌಸ್ ಅನ್ನು ಆಯ್ಕೆ ಮಾಡಿ. ಮೌಸ್‌ನ ಮೂಲ ಗುಂಡಿಗಳನ್ನು ಎಡದಿಂದ ಬಲಕ್ಕೆ ಬದಲಾಯಿಸಲು (ಎಡಗೈಯಲ್ಲಿ ಬಳಸಲು ಯೋಗ್ಯವಾಗಿಸಲು ),ಗುಂಡಿಗಳು ಟ್ಯಾಬ್‌ನಿಂದ, ಎಡಗೈಯ ಮೌಸ್ ಚೆಕ್‌ ಬಾಕ್ಸನ್ನು ಕ್ಲಿಕ್ ಮಾಡಿ ಹಾಗು ಮುಚ್ಚು ಅನ್ನು ಕ್ಲಿಕ್ಕಿಸಿ.
ಒಂದು gedit ಕಡತಕ್ಕೆ ಹೊಸದೊಂದು ಚಿಹ್ನೆಯನ್ನು ಸೇರಿಸಲು, ಮುಖ್ಯ ಮೆನು ಪಟ್ಟಿಯಿಂದ ಅನ್ವಯಗಳು > ಸಲಕರಣೆಗಳು > ಕ್ಯಾರೆಕ್ಟರ್ ಮ್ಯಾಪ್ ಅನ್ನು ಆಯ್ಕೆ ಮಾಡಿ. ಮುಂದಕ್ಕೆ, ಕ್ಯಾರಕ್ಟರ್ ಮ್ಯಾಪ್‌ ಮೆನು ಪಟ್ಟಿಯಿಂದಹುಡುಕು > Find… ಅನ್ನು ಆರಿಸಿ, ಹುಡುಕು ಸ್ಥಳದಲ್ಲಿ ಚಿಹ್ನೆಯ ಹೆಸರನ್ನು ನಮೂದಿಸಿ ಹಾಗು ಮುಂದಕ್ಕೆ ಅನ್ನು ಕ್ಲಿಕ್ಕಿಸಿ. ನೀವು ಬಯಸಿದ ಚಿಹ್ನೆಯು ಕ್ಯಾರೆಕ್ಟರ್ ಟೇಬಲ್‌ ನಲ್ಲಿ ಹೈಲೈಟ್‌ ಮಾಡಲ್ಪಡುತ್ತದೆ.ಕಾಪಿ ಮಾಡಬೇಕಿರುವ ಪಠ್ಯ ಸ್ಥಳದಲ್ಲಿ ಇರಿಸಲು ಹೈಲೈಟ್‌ ಆದಂತಹ ಈ ಚಿಹ್ನೆಯ ಮೇಲೆ ಎರಡು ಬಾರಿ ಕ್ಲಿಕ್ಕಿಸಿ ಹಾಗು ಕಾಪಿ ಮಾಡು ಗುಂಡಿಯನ್ನು ಕ್ಲಿಕ್ಕಿಸಿ . ಈಗ ನಿಮ್ಮ ದಸ್ತಾವೇಜಿಗೆ ಮರಳಿ ಹಾಗು gedit ಮೆನು ಪಟ್ಟಿಯಿಂದ ಸಂಪಾದನೆ > ಅಂಟಿಸು ಅನ್ನು ಆಯ್ಕೆ ಮಾಡಿ.
ಮೇಲಿನ ಪಠ್ಯವು ಅನ್ವಯದ ಹೆಸರುಗಳನ್ನು; ಗಣಕದಾದ್ಯಂತದ ಮೆನು ಹೆಸರುಗಳು ಹಾಗು ಅಂಶಗಳು; ಅನ್ವಯ-ನಿಗದಿತ ಮೆನು ಹೆಸರುಗಳು; ಹಾಗು ಗುಂಡಿಗಳು ಮತ್ತು ಒಂದು GUI ಸಂಪರ್ಕಸಾಧನದ ಒಳಗಿರುವ ಪಠ್ಯವನ್ನು ಒಳಗೊಂಡಿದ್ದು, ಎಲ್ಲವೂ ಸರಿಯಾದ ಪ್ರಮಾಣದಲ್ಲಿ ಬೋಲ್ಡ್ ಆಗಿದ್ದು ಸನ್ನಿವೇಶಕ್ಕೆ ಸರಿಯಾಗಿ ಪ್ರತ್ಯೇಕಿಸಬಹುದಾಗಿರುತ್ತವೆ.
ಒಂದು ಮೆನು ಹಾಗು ಅದರ ಉಪ-ಮೆನುಗಳ ಮೂಲಕ ಹಾದು ಹೋಗಲು ಬಳಸಲಾದ > ಶಾಟ್‌೯ಹ್ಯಾಂಡ್ ಅನ್ನು ಗಮನಿಸಿ. ಇದರಿಂದ ಮೆನು ಪಟ್ಟಿಯಲ್ಲಿನ ಗಣಕ ಮೆನುವನ್ನು ಆರಿಸಿ ನಂತರ ಅದರ ಉಪ ಮೆನುವಾದಂತಹ ಆದ್ಯತೆಗಳು ಮೂಲಕ ಮೌಸ್‌ ಅನ್ನು ಆಯ್ಕೆಯನ್ನು ಬಳಸುವ ಕ್ರಮವನ್ನು ಅನುಸರಿಸುವುದರಲ್ಲಿನ ಕ್ಲಿಷ್ಟತೆಯನ್ನು ತಪ್ಪಿಸಬಹುದಾಗಿದೆ.
Mono-spaced Bold Italic ಅಥವ Proportional Bold Italic
Mono-spaced Bold ಅಥವ Proportional Bold, ಜೊತೆಗೆ ಸೇರಿಸಲಾದ Italics ಬದಲಾಯಿಸಬಹುದಾದ ಹಾಗು ವೇರಿಯಬಲ್ ಪಠ್ಯವನ್ನು ಸೂಚಿಸುತ್ತದೆ. ಓರೆ ಅಕ್ಷರಗಳು , ನೀವು ನಿಜವಾಗಿಯೂ ನಮೂದಿಸದೆ ಇರುವ ಪಠ್ಯವನ್ನು ಅಥವ ತೋರಿಸಲಾಗಿರುವುಗಳಲ್ಲಿ ಸನ್ನಿವೇಶಕ್ಕೆ ಅನುಗುಣವಾಗಿ ಬದಲಾಗುವ ಪಠ್ಯವನ್ನು ಸೂಚಿಸುತ್ತವೆ. ಉದಾಹರಣೆಗೆ:
ssh ಅನ್ನು ಬಳಸಿಕೊಂಡು ದೂರಸ್ಥ ಗಣಕದೊಂದಿಗೆ ಸಂಪರ್ಕ ಹೊಂದಲು, ಶೆಲ್‌ ಪ್ರಾಂಪ್ಟಿನಲ್ಲಿ ssh username@domain.name ಎಂದು ನಮೂದಿಸಿ. ದೂರಸ್ಥ ಗಣಕವು example.com ಆಗಿದ್ದು ಹಾಗು ಆ ಗಣಕದಲ್ಲಿ ನಿಮ್ಮ ಬಳಕೆದಾರ ಹೆಸರು john ಆಗಿದ್ದಲ್ಲಿ, ssh john@example.com ಎಂದು ನಮೂದಿಸಿ.
mount -o remount file-system ಆಜ್ಞೆಯು ಹೆಸರಿಸಲಾದ ಕಡತ ವ್ಯವಸ್ಥೆಯನ್ನು ಮರಳಿ ಆರೋಹಿಸುತ್ತದೆ. ಉದಾಹರಣೆಗೆ, /home ಕಡತ ವ್ಯವಸ್ಥೆಯನ್ನು ಮರಳಿ ಆರೋಹಿಸಲು, ಬಳಸಬೇಕಿರು ಆಜ್ಞೆಯು mount -o remount /home ಆಗಿರುತ್ತದೆ.
ಪ್ರಸಕ್ತ ಅನುಸ್ಥಾಪಿತಗೊಂಡಿರುವ ಪ್ಯಾಕೇಜಿನ ಆವೃತ್ತಿಯನ್ನು ನೋಡಲು rpm -q package ಆಜ್ಞೆಯನ್ನು ಬಳಸಿ. ಅದು ಈ ಕೆಳಗಿನಂತಿರುವ ಫಲಿತಾಂಶವನ್ನು ಒದಗಿಸುತ್ತದೆ: package-version-release.
ಮೇಲೆ ಓರೆ ಅಕ್ಷರಗಳಲ್ಲಿ ನಮೂದಿಸಲಾದ ಪದಗಳನ್ನು ಗಮನಿಸಿ — username, domain.name, file-system, package, version ಹಾಗು release. ಪ್ರತಿಯೊಂದು ಪದವೂ , ಒಂದೊ ಒಂದು ಆಜ್ಞೆಯನ್ನು ನೀಡುವಾಗ ನೀವು ನಮೂದಿಸುವ ಪಠ್ಯಕ್ಕೆ ಅಥವ ಗಣಕವು ತೋರಿಸಲಾಗುವ ಪಠ್ಯಕ್ಕೆ ಬದಲೀ ಪದವಾಗಿದೆ.
ಒಂದು ಕಾರ್ಯದ ಶೀರ್ಷಿಕೆಯನ್ನು ತೋರಿಸಲು ಸಾಮಾನ್ಯವಾಗಿ ಬಳಸಲಾಗುವುದಲ್ಲದೆ, ಓರೆ ಅಕ್ಷರಗಳು ಹೊಸ ಹಾಗು ಪ್ರಮುಖವಾದ ಪದವನ್ನು ಪ್ರಥಮವಾಗಿ ಬಳಸಲಾಗಿದೆ ಎಂದೂ ಸಹ ಸೂಚಿಸುತ್ತದೆ. ಉದಾಹರಣೆಗೆ:
ಅಪಾಚೆ HTTP ಪರಿಚಾರಕವು ಮನವಿಗಳನ್ನು ಸ್ವೀಕರಿಸಿದಾಗ, ಅವುಗಳನ್ನು ನಿಭಾಯಿಸಲು ಅದು ಉಪ ಪ್ರಕ್ರಿಯೆಗಳನ್ನು ಅಥವ ಎಳೆಗಳನ್ನು(ತ್ರೆಡ್) ಕಳುಹಿಸುತ್ತದೆ. ಈ ಬಗೆಯ ಉಪ ಪ್ರಕ್ರಿಯೆಗಳು ಅಥವ ಎಳೆಗಳ(ತ್ರೆಡ್) ಸಮೂಹವನ್ನು server-pool ಎಂದು ಕರೆಯಲಾಗುತ್ತದೆ.ಅಪಾಚೆಯ HTTP ಪರಿಚಾರಕ 2.0 ನ ಅಡಿಯಲ್ಲಿ, server-poolಗಳನ್ನು ನಿರ್ವಹಿಸಲು ಹಾಗು ನಿಭಾಯಿಸಲು Multi-Processing Modules (MPMs) ಎಂದು ಕರೆಯಲ್ಪಡುವ ಘಟಕಗಳ ಸಮೂಹವನ್ನು ರೂಪಿಸಲಾಗಿದೆ. ಇದರಲ್ಲಿ ಬೇರೆ ಘಟಕಗಳಂತಿರದೆ, ಅಪಾಚೆ HTTP ಪರಿಚಾರಕದಿಂದ MPM ಸಮೂಹದಿಂದ ಕೇವಲ ಒಂದು ಘಟಕವನ್ನು ಮಾತ್ರ ಲೋಡ್‌ ಮಾಡಬಹುದಾಗಿದೆ.

1.2. ಪುಲ್‌-ಕೋಟ್ ಅನುಸರಣೆಗಳು

ಎರಡು, ಸಾಮಾನ್ಯವಾಗಿ ಅನೇಕ ಸಾಲಗಳ, ಸುತ್ತಮುತ್ತಲಿನ ಪಠ್ಯದಿಂದ ದತ್ತಾಂಶ ಬಗೆಗಳನ್ನು ತೋರಿಸಲು ಬಳಸಲಾಗುತ್ತದೆ.
ಟರ್ಮಿನಲ್‌ಗೆ ಕಳುಹಿಸಲಾಗುವ ಔಟ್‌ಪುಟ್‌ಗಳನ್ನು Mono-spaced Roman ನಲ್ಲಿ ಬರೆಯಲಾಗುತ್ತದೆ ಹಾಗು ಹೀಗೆ ಪ್ರದರ್ಶಿಸಲಾಗುತ್ತದೆ:
books        Desktop   documentation  drafts  mss    photos   stuff  svn
books_tests  Desktop1  downloads      images  notes  scripts  svgs
ಆಕರ-ಸಂಜ್ಞೆ ಪಟ್ಟಿಗಳನ್ನು Mono-spaced Roman ನಲ್ಲಿಯೂ ಸಹ ಬರೆಯಲಾಗುತ್ತದೆ ಆದರೆ ಈ ಕೆಳಗಿನಂತೆ ಪ್ರದರ್ಶಿಸಿ ಹೈಲೈಟ್ ಮಾಡಲಾಗುತ್ತದೆ:
package org.jboss.book.jca.ex1;

import javax.naming.InitialContext;

public class ExClient
{
   public static void main(String args[]) 
       throws Exception
   {
      InitialContext iniCtx = new InitialContext();
      Object         ref    = iniCtx.lookup("EchoBean");
      EchoHome       home   = (EchoHome) ref;
      Echo           echo   = home.create();

      System.out.println("Created Echo");

      System.out.println("Echo.echo('Hello') = " + echo.echo("Hello"));
   }
   
}

1.3. ಸೂಚನೆಗಳು ಹಾಗು ಎಚ್ಚರಿಕೆಗಳು

ಅಂತಿಮವಾಗಿ, ನೀವು ಕಡೆಗಣಿಸಬಹುದಾದ ಮಾಹಿತಿಗಳತ್ತ ನಿಮ್ಮ ಗಮನವನ್ನು ಸೆಳೆಯಲು ನಾವು ಮೂರು ಬಗೆಯ ದೃಶ್ಯ ಶೈಲಿಗಳನ್ನು ಬಳಸುತ್ತೇವೆ.

ಸೂಚನೆ

ಸೂಚನೆಯು, ಎದುರಿಗಿರುವ ಕೆಲಸವನ್ನು ನಿಭಾಯಿಸಲು ಬಳಸಬಹುದಾದ ಒಂದು ಸಲಹೆ, ಹತ್ತಿರದ ಪರಿಹಾರ ಅಥವ ಪರ್ಯಾಯ ಪರಿಹಾರವಾಗಿರುತ್ತದೆ. ಒಂದು ಸೂಚನೆಯನ್ನು ಆಲಕ್ಷಿಸುವುದರಿಮದ ಯಾವುದೆ ಋಣಾತ್ಮಕ ಪರಿಣಾಮವಿರುವುದಿಲ್ಲದಿದ್ದರೂ ನಿಮ್ಮ ಕೆಲಸವನ್ನು ಸುಲಭಗೊಳಿಸುವ ಒಂದು ಉಪಾಯದಿಂದ ನೀವು ವಂಚಿತರಾಗಬಹುದು.

ಮಹತ್ವವಾದ ಮಾಹಿತಿ

ಸುಲಭವಾಗಿ ಮರೆತು ಹೋಗಬಹುದಾದ ಪ್ರಮುಖ ಬಾಕ್ಸುಗಳ ವಿವರಗಳು: ಕೇವಲ ಪ್ರಸಕ್ತ ಅಧಿವೇಶನಕ್ಕೆ ಮಾತ್ರ ಅನ್ವಯಿಸುವ ಸಂರಚನಾ ಬದಲಾವಣೆಗಳು, ಅಥವ ಒಂದು ಅಪ್‌ಡೇಟನ್ನು ಅನ್ವಯಿಸುವ ಮೊದಲು ಮರು ಆರಂಭಗೊಳಿಸಬೇಕಿರುವ ಸೇವೆಗಳು. ಪ್ರಮುಖ ಬಾಕ್ಸುಗಳನ್ನು ಆಲಕ್ಷಿಸುವುದರಿಂದ ಮಾಹಿತಿಯು ನಾಶಗೊಳ್ಳುವುದಿಲ್ಲ, ಆದರೆ ಕಿರಿಕಿರಿ ಹಾಗು ನಿರಾಶೆಗೆ ಕಾರಣವಾಗಬಹುದು.

ಎಚ್ಚರಿಕಾ ಸೂಚನೆ

ಒಂದು ಎಚ್ಚರಿಕೆಯನ್ನು ಆಲಕ್ಷಿಸಬಾರದು. ಎಚ್ಚರಿಕೆಗಳನ್ನು ಆಲಕ್ಷಿಸುವುದರಿಂದ ಹೆಚ್ಚಿನ ಬಾರಿ ಮಾಹಿತಿಯು ನಾಶಗೊಳ್ಳಲು ಕಾರಣವಾಗುತ್ತದೆ.

2. ನಮಗೆ ನಿಮ್ಮ ಫೀಡ್-ಬ್ಯಾಕಿನ ಬೇಕಿದೆ!

ಒಂದು ದೋಷ ವರದಿಯನ್ನು ಸಲ್ಲಿಸುವಾಗ, ಕೈಪಿಡಿಯ ಈ ಕೆಳಗಿನ ಐಡೆಂಟಿಫಯರನ್ನು ನಮೂದಿಸುವುದನ್ನು ಮರೆಯಬೇಡಿ: Common_Content
ದಸ್ತಾವೇಜನ್ನು ಉತ್ತಮಗೊಳಿಸುವ ಬಗ್ಗೆ ನೀವು ಸಲಹೆ ನೀಡುವಂತಿದ್ದರೆ, ಅದನ್ನು ವಿವರಿಸುವಾಗ ಆದಷ್ಟು ಮಟ್ಟಿಗೆ ನಿರ್ದಿಷ್ಟವಾಗಿರಲಿ. ನಿಮಗೆ ಒಂದು ದೋಷ ಕಂಡು ಬಂದಲ್ಲಿ, ದಯವಿಟ್ಟು ನಮಗೆ ಅದನ್ನು ಪತ್ತೆ ಹಚ್ಚಲು ಸುಲಭವಾಗುವಂತೆ ಅಧ್ಯಾಯದ ಸಂಖ್ಯೆಯನ್ನು ಹಾಗು ಅದರ ಸುತ್ತಮುತ್ತಲಿರುವ ಒಂದಿಷ್ಟು ಪಠ್ಯವನ್ನು ನಮೂದಿಸಿ.